ಕೊಪ್ಪಳದಲ್ಲೂ ಕೊರೊನಾ ಭೀತಿ: ವಿದೇಶದಿಂದ ಬಂದ ದಂಪತಿ ಮೇಲೆ ನಿಗಾ - Covid Panic In Koppal
🎬 Watch Now: Feature Video
ಕೊಪ್ಪಳ:ವಿಶ್ವದಾದ್ಯಂತ ಭೀತಿ ಮೂಡಿಸಿರುವ ಕೋವಿಡ್ -19 ವೈರಸ್, ಜಿಲ್ಲೆಯ ಜನರಲ್ಲೂ ಆತಂಕ ಸೃಷ್ಟಿಸಿದೆ. ಪ್ರಮುಖವಾಗಿ ಜಿಲ್ಲೆಯ ಗ್ರಾಮವೊಂದರ ದಂಪತಿ ಇತ್ತೀಚೆಗೆ ಇರಾನ್ಗೆ ತೆರಳಿದ್ದರು. ಇದೀಗ ವಾಪಸ್ ಆಗಿದ್ದು, ಅವರಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸಿದ್ದಾರೆ. ಆದರೆ, ಈ ದಂಪತಿಯಲ್ಲಿ ಕೊರೊನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆತಂಕಪಡುವ ಅಗತ್ಯವಿಲ್ಲ. ವಿದೇಶದಿಂದ ಬಂದಿರುವ ಕಾರಣ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಈಟಿವಿ ಭಾರತಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ.ಲಿಂಗರಾಜ ಅಂಗಡಿ ಸ್ಪಷ್ಟಪಡಿಸಿದ್ದಾರೆ.
Last Updated : Mar 4, 2020, 2:03 PM IST