ಬಳ್ಳಾರಿ: ನೃತ್ಯದ ಮೂಲಕ ಕೊರೊನಾ ಕುರಿತು ಜಾಗೃತಿ - ಬಳ್ಳಾರಿ ಕೊರೊನಾ ಜಾಗೃತಿ ಕಾರ್ಯಕ್ರಮ
🎬 Watch Now: Feature Video
ಬಳ್ಳಾರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಿನ್ನೆ ಬಳ್ಳಾರಿ ಅಪೋಲೋ ಡಯಾಗ್ನಾಸ್ಟಿಕ್, ಸೂರ್ಯಕಲಾ ಮತ್ತು ಸೇವಾ ಬಳಗದವರ ನೇತೃತ್ವದಲ್ಲಿ ನೃತ್ಯದ ಮೂಲಕ ಕೊರೊನಾ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸೇಶನ್ ಕುರಿತು ಅರಿವು ಮೂಡಿಸಲಾಯಿತು. ಈ ನೃತ್ಯ ರೂಪಕವನ್ನು ಜೀರೋ ಗ್ರ್ಯಾವಿಟಿ ಡ್ಯಾನ್ಸ್ ಅಕಾಡೆಮಿಯ ಮುಖ್ಯಸ್ಥ ಉಮೇಶ್, ಸ್ನೇಹಿತರು ಹಾಗೂ ಬಳ್ಳಾರಿಯ ಎಲ್ಲಾ ನುರಿತ ನೃತ್ಯ ತಂಡಗಳ ಸದಸ್ಯರಿಂದ ಏರ್ಪಡಿಸಲಾಗಿತ್ತು. ಬಳಿಕ ಸೂರ್ಯಕಲಾ ಮತ್ತು ಸೇವಾ ಬಳಗದ ಅಧ್ಯಕ್ಷ ಸುರೇಶ್ ಅಲುವೇಲು ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ ಮಾಡಿದರು.