ದೈವಾರಾಧನೆಗೂ ಪೆಟ್ಟು ನೀಡಿದ ಕೊರೊನಾ.. ಈಟಿವಿಯೊಂದಿಗೆ ಸಂಕಷ್ಟ ಹಂಚಿಕೊಂಡ ದಯಾನಂದ ಕತ್ತಲ್ಸಾರ್ - Dayanadh Kattalsar
🎬 Watch Now: Feature Video
ಆದಿಗೂ(ಮಾನಸಿಕ ರೋಗ) ವ್ಯಾಧಿಗೂ(ದೈಹಿಕ ರೋಗ) ಮದ್ದು-ಮಾಯದ ವ್ಯವಸ್ಥೆಯ ರೂಪವಾದ ದೈವಾರಾಧನೆಗೂ ಕೊರೊನಾ ಮಹಾಮಾರಿ ಬಲವಾದ ಏಟು ನೀಡಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳುಗಳು ದೈವಾರಾಧನೆಯ ಪರ್ವಕಾಲವಾಗಿದ್ದು, ಈ ಸಂದರ್ಭದಲ್ಲಿ ಕರಾವಳಿಯ ಎಲ್ಲೆಡೆಯೂ ನೇಮ, ಕೋಲ, ಅಗೇಲು ಸೇವೆ ನಡೆಯೋದು ಸಾಮಾನ್ಯ. ಆದರೆ, ಕೊರೊನಾ ಲಾಕ್ಡೌನ್ ಪರಿಣಾಮ ಎಲ್ಲರೂ ಮನೆಯಲ್ಲಿಯೇ ಲಾಕ್ ಆಗಿದ್ದಾರೆ. ಅಲ್ಲದೇ ಕೊರೊನಾ ಸೋಂಕು ಹಿಡಿತಕ್ಕೆ ಬಾರದೇ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಸರಕಾರ ಆದೇಶ ಮಾಡಿದೆ. ಪರಿಣಾಮ ಕರಾವಳಿಯಾದ್ಯಂತ ನಡೆಯುವ ದೈವಗಳ ಕೋಲ, ನೇಮ, ನಡಾವಳಿಗಳು ಸಂಪೂರ್ಣ ಸ್ತಬ್ಧವಾಗಿದೆ. ಪರಿಣಾಮ ದೈವ ನರ್ತಕರು, ದರ್ಶನ ಪಾತ್ರಿಗಳು, ಬ್ಯಾಂಡ್ನವರು, ವಾಲಗದವರು, ದೀವಟಿಗೆಯವರು ಸೇರಿದಂತೆ 16 ವರ್ಗಗಳು ಸಮಸ್ಯೆಗೆ ಸಿಲುಕಿಕೊಂಡಿದೆ. ಇವರೆಲ್ಲರ ಸಮಸ್ಯೆಗಳ ಬಗ್ಗೆ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಹಾಗೂ ದೈವ ನರ್ತಕರೂ ಆಗಿರುವ ದಯಾನಂದ ಕತ್ತಲ್ ಸಾರ್ ಅವರು ಸವಿಸ್ತಾರವಾಗಿ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
Last Updated : May 4, 2020, 8:04 PM IST