ಕಲಬುರಗಿಯಲ್ಲಿ ಮುಂದುವರೆದ ಪ್ರವಾಹ ಪರಿಸ್ಥಿತಿ...ಹಲವೆಡೆ ಸಂಚಾರ ಸ್ಥಗಿತ - ಜೇವರ್ಗಿ ಕಟ್ಟಿಸಂಗಾವಿ ಬ್ರಿಡ್ಜ್
🎬 Watch Now: Feature Video
ಕಲಬುರಗಿ: ಭೀಮಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರೂ ಸಹ ಪ್ರವಾಹ ಮಾತ್ರ ಮುಂದುವರೆದಿದೆ. ಜೇವರ್ಗಿ ಕಟ್ಟಿಸಂಗಾವಿ ಬ್ರಿಡ್ಜ್ ಬಳಿ ಅಪಾಯ ಮಟ್ಟಮೀರಿ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆ ಸಂಚಾರ ಬಂದ್ ಆಗಿರುವುದರಿಂದ ವಾಹನಗಳು ಸಾಲಾಗಿ ನಿಂತಿವೆ. ಸರಡಗಿ ಕೊನಹಿಪ್ಪರಗಾ ರಸ್ತೆ ಮೂಲಕ ಸಂಚರಿಸುವಾಗ ಎರಡು ಲಾರಿಗಳು ನೀರಿಗೆ ವಾಲಿದ್ದು, ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿವೆ. ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.