ದಾವಣಗೆರೆ ಪಾಲಿಕೆ... ಬಿಜೆಪಿಗೆ ಮುಖಭಂಗ, ಕೈಗೆ ಬೆಣ್ಣೆದೋಸೆ! - ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ
🎬 Watch Now: Feature Video
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಕಮಾಲ್ ಮಾಡಿದೆ. 45ರಲ್ಲಿ 22 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಕೈ ಹೊರಹೊಮ್ಮಿದೆ. ಇನ್ನು
ಅಬ್ಬರದ ಪ್ರಚಾರ ಮಾಡಿದ್ದ ಬಿಜೆಪಿ 17 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಂಡರೆ, ಪಕ್ಷೇತರರು 5 ಮಂದಿ ಹಾಗೂ ಜೆಡಿಎಸ್ನ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಪಾಲಿಕೆಯಲ್ಲಿ ದರ್ಬಾರ್ ನಡೆಸುತ್ತೆ ಎಂಬ ವಿಶ್ವಾಸದಲ್ಲಿ ಕೈ ಇದ್ದರೆ, ಕಮಲ ಅಧಿಕಾರದ ಗದ್ದುಗೆ ಏರಲು ತೆರೆಮರೆ ಕಸರತ್ತು ಆರಂಭಿಸಿದೆ.