ಗಣೇಶನ ದರ್ಶನಕ್ಕೆ ಬಂದ ನಾಗಪ್ಪನ ರಕ್ಷಣೆ - ನಾಗರ ಹಾವಿನ ರಕ್ಷಣೆ
🎬 Watch Now: Feature Video
ಹುಬ್ಬಳ್ಳಿ: ನಗರದ ಅಮರಗೋಳದ ಬಸಪ್ಪ ಕಿತ್ತೂರು ಎಂಬವರ ಮನೆಯಲ್ಲಿ ಕಾಣಿಸಿಕೊಂಡ ನಾಗರ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ. ಬಸಪ್ಪ ಕಿತ್ತೂರು ಅವರು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮೂರ್ತಿ ಇಟ್ಟ ಸ್ಥಳದಲ್ಲಿ ಬೆಳಿಗ್ಗೆ ನಾಗರ ಹಾವು ಕಾಣಿಸಿಕೊಂಡಿದೆ. ಕೂಡಲೇ ಉರಗ ಪ್ರೇಮಿ ಸ್ನೇಕ್ ನಾಗರಾಜ್ಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ನಾಗರಾಜ್, ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.