ಮಗನ ಆತ್ಮಹತ್ಯೆ ಸುದ್ದಿ ಕೇಳಿ ತಾಯಿಯೂ ಸಾವಿಗೆ ಶರಣು - MOTHER AND SON_DEATH
🎬 Watch Now: Feature Video
ಚಿತ್ರದುರ್ಗ : ಮಗನ ಆತ್ಮಹತ್ಯೆ ಸುದ್ದಿ ಕೇಳಿ ತಾಯಿಯೂ ಸಾವಿಗೆ ಶರಣಾಗಿರುವ ಮನಕಲಕುವ ಘಟನೆ ಜಿಲ್ಲೆಯ ಭರಮಸಾಗರ ಹೋಬಳಿ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಜುನಾಥ್ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇನ್ನೂ ಮಂಜುನಾಥ್ ಸಾವಿನ ವಿಷಯ ತಿಳಿಯುತ್ತಿದ್ದಂತೆ ತಾಯಿ ವಿಜಯಲಕ್ಷ್ಮಿ ಕೂಡ ವಿಷ ಸೇವಿಸಿದ್ದಾಳೆ. ವಿಷ ಸೇವಿಸಿದ ವಿಜಯಲಕ್ಷ್ಮಿಯನ್ನು ಸ್ಥಳೀಯರು ಭರಮಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಕೆಯೂ ಸಾವನ್ನಪ್ಪಿದ್ದಾರೆ. ಭರಮಸಾಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.