ವಿಘ್ನ ವಿನಾಶಕನನ್ನು ನಿರ್ವಿಘ್ನವಾಗಿ ಬರ ಮಾಡಿಕೊಂಡ ಕಾಫಿನಾಡಿನ ಜನತೆ! - ಚಿಕ್ಕಮಗಳೂರು
🎬 Watch Now: Feature Video
ಚಿಕ್ಕಮಗಳೂರು: ನಾಡಿನಾದ್ಯಂತ ಗೌರಿ - ಗಣೇಶ ಹಬ್ಬವನ್ನು ಅತ್ಯಂತ ಅದ್ಧೂರಿಯಿಂದ ಆಚರಣೆ ಮಾಡುತ್ತಿದ್ದು, ಕಾಫಿನಾಡಿನಲ್ಲೂ ವಿಘ್ನ ವಿನಾಶಕನ ಆಚರಣೆ ಕಳೆ ಕಟ್ಟಿದೆ. ಇಂದು ಬೆಳಗ್ಗೆಯಿಂದಲೇ ಯುವಕರು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲು ಉತ್ಸಕರಾಗಿದ್ದು, ತಂಡೋಪ ತಂಡವಾಗಿ ಬಂದೂ ಗಣೇಶನ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನಗರದ ಕುಂಬಾರ ಬೀದಿಯಲ್ಲಿ ಯುವಕ ತಂಡ ತುಂಬಿ ತುಳುಕುತ್ತಿದ್ದು, ಗಣೇಶನಿಗೆ ಜೈ ಕಾರ ಹಾಕುತ್ತಾ ಸಂತೋಷ ಸಂಭ್ರಮದಿಂದ ಮೂರ್ತಿಗಳನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು. ಆದರೆ, ಮಲೆನಾಡು ಭಾಗದ ನೆರೆ ಹಾವಳಿ ಪ್ರದೇಶದಲ್ಲಿ ಹಬ್ಬದ ಸಡಗರ ಕೊಂಚ ಕಡಿಮೆಯಾಗಿದೆ.