ನಾಳೆ ಕೇಂದ್ರ ಬಜೆಟ್: ವಿಜಯಪುರ ಜಿಲ್ಲೆ ಜನರ ನಿರೀಕ್ಷೆಗಳೇನು? - ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಬಲ
🎬 Watch Now: Feature Video
ನಾಳೆ ಕೇಂದ್ರ ಬಜೆಟ್ ಹಿನ್ನೆಲೆ ಜಿಲ್ಲೆಗೆ ಯಾವ ಯೋಜನೆಗಳು ದೊರೆಯುತ್ತವೆ. ಎಷ್ಟು ಲಾಭವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಜನ ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಬಲ ತುಂಬಬೇಕು. ರೈಲ್ವೆ ಯೋಜನೆ ಇನ್ನೂ ಹೆಚ್ಚುವರಿಯಾಗಿ ಬೇಕು. ರೈತರ ಪರ ಬಜೆಟ್ ಮಂಡಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂ.ಗಳ ಮಾಸಾಶನ ದೊರೆಯಬೇಕು. ನಿರುದ್ಯೋಗಿ ಯುವಕರಿಗೆ ಹೆಚ್ಚು ಉದ್ಯೋಗಾವಕಾಶ ಯೋಜನೆ ರೂಪಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಸೇರಿದಂತೆ ಹಲವು ಹೊಸ ಯೋಜನೆಗಳು ಜಿಲ್ಲೆಗೆ ಅನುಕೂಲವಾಗುವಂತೆ ಮಾಡಬೇಕು ಎಂಬ ಬೇಡಿಕೆ ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ.