ಹೆರಿಗೆಯಾದ ಪತ್ನಿಗೆ ಅನ್ನದ ಬುತ್ತಿ ಸೇರಲಿಲ್ಲ, ಅಣ್ಣ-ತಂಗಿ ಮಾರ್ಗಮಧ್ಯೆ ಮಸಣ ಸೇರಿದ್ರು. ಮನಕಲುಕುವ ವಿಡಿಯೋ ಇಲ್ಲಿದೆ - undefined
🎬 Watch Now: Feature Video
ಬೈಕ್ ಮೇಲೆ ಲಾರಿ ಹರಿದು, ಅಣ್ಣ-ತಂಗಿ ಇಬ್ಬರೂ ಸಾವನ್ನಪ್ಪಿ, ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಯಚೂರು ನಗರದ ಬಸವೇಶ್ವರ ಸರ್ಕಲ್ ಬಳಿ ನಡೆದಿದೆ. ಬೈಕ್‌ನಲ್ಲಿ ಅಣ್ಣ-ತಂಗಿ ಹಾಗೂ 8 ವರ್ಷದ ಬಾಲಕ ಸಿಗ್ನಲ್‌ನಿಂದ ಮುಂದೆ ತೆರಳುತ್ತಿದ್ದ ವೇಳೆ ಬೈಕ್ ಮೇಲೆ ಲಾರಿ ಹರಿದಿದೆ. ಈ ವೇಳೆ ಗೌರಿಶಂಕರ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಅವರ ತಂಗಿ ಕೀರ್ತಿ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು. ಬೈಕ್ ಮುಂದೆ ಕುಳಿತಿದ್ದ 8 ವರ್ಷದ ಬಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆರಿಗೆಯಾದ ಪತ್ನಿಗೆ ಅನ್ನದ ಬುತ್ತಿ ಕೊಂಡೊಯ್ಯುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.