ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಕಾನೂನು ಬಾಹಿರ: ವಕೀಲ ಪೊನ್ನಣ್ಣ - CBI raid on DK Shivakumar house is illegal
🎬 Watch Now: Feature Video
ಬೆಂಗಳೂರು: ಸರ್ಕಾರ ಸಿಬಿಐ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ನಾವು ಕೋರ್ಟ್ಗೆ ಹೋಗಿದ್ದೇವೆ. ಪ್ರಾಸಿಕ್ಯೂಷನ್ ಪ್ರಶ್ನಿಸಿ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೀತಿದೆ. ಆದರೆ ಇಂತಹ ಸಂದರ್ಭದಲ್ಲಿ ಸಿಬಿಐ ದಾಳಿ ಕಾನೂನು ಬಾಹಿರ ಎಂದು ಡಿಕೆಶಿ ಪರ ವಕೀಲ ಪೊನ್ನಣ್ಣ ಆರೋಪಿಸಿದ್ದಾರೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ನಮಗೆ ಸಿಬಿಐ ದಾಳಿ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ಮಾಹಿತಿ ಪಡೆದು ನಾವು ಇವತ್ತೇ ಕೋರ್ಟ್ಗೆ ಮತ್ತೆ ಅಪೀಲ್ ಹೋಗುತ್ತೇವೆ. ಸಿಬಿಐನ ಕಾನೂನು ಬಾಹಿರ ದಾಳಿಯನ್ನು ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದರು. ಇದೇ ವೇಳೆ ಸೋಲಾರ್ ಟೆಂಡರ್ ಮತ್ತು ಎನರ್ಜಿ ಕಾಂಟ್ರ್ಯಾಕ್ಟರ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.