ಪ್ರತಿಪಕ್ಷ ನಾಯಕರ ಟೀಕೆ: ವಾರ್ಡ್ ಪರಿಶೀಲನೆ ರದ್ದುಗೊಳಿಸಿದ ಮುನೀಂದ್ರ ಕುಮಾರ್
🎬 Watch Now: Feature Video
ಬೆಂಗಳೂರು ನಗರದ ಯಲಹಂಕ ವಲಯದ ವಾರ್ಡ್ 11ರಲ್ಲಿ ಸಾರ್ವಜನಿಕ ಮೂಲಸೌಕರ್ಯಗಳ ವ್ಯವಸ್ಥೆ ಬಗ್ಗೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ನಾಳೆ ಪರಿಶೀಲನೆಗೆ ಮುಂದಾಗಿದ್ದರು. ಆದರೆ ಮೇಯರ್, ಉಪಮೇಯರ್, ಆಯುಕ್ತರಿರುವಾಗ ಕಾನೂನು ಬಾಹಿರವಾಗಿ ಪರಿಶೀಲನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಾಲಿಕೆ ಸದಸ್ಯರು, ಶಾಸಕರ ಕ್ಷೇತ್ರವನ್ನೇ ಆಯ್ಕೆ ಮಾಡಿದ್ದಾರೆ. ಮೇಯರ್ ಹಾಗೂ ಆಡಳಿತ ಪಕ್ಷದ ನಾಯಕರ ನಡುವೆಯೇ ಹೊಂದಾಣಿಕೆ ಇಲ್ಲ ಎಂದು ಪ್ರತಿಪಕ್ಷ ನಾಯಕ ವಾಜಿದ್ ಟೀಕಿಸಿದ್ದರು. ಬಳಿಕ ನಾಳೆಯ ಪರಿಶೀಲನೆಯನ್ನು ರದ್ದು ಮಾಡಿರುವ ಮುನೀಂದ್ರ ಕುಮಾರ್, ಕಾನೂನು ಮುಖ್ಯಸ್ಥರ ಸಲಹೆ ಪಡೆದು, ಆಡಳಿತ ಪಕ್ಷದ ನಾಯಕರಿಗೂ ಪರಿಶೀಲನೆಯ ಅಧಿಕಾರವಿದೆಯೇ ಎಂದು ತಿಳಿದು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.