ಕಾಂಗ್ರೆಸ್ನದ್ದು 'ದನ ಸತ್ತರೆ ರಣ ಹದ್ದುಗಳನ್ನು ಕಾಯುವ ಮನಸ್ಥಿತಿ': ಸಿ.ಟಿ. ರವಿ ವ್ಯಂಗ್ಯ - C T Ravi react about Hathras rape case
🎬 Watch Now: Feature Video
ಉತ್ತರಪ್ರದೇಶದ ಹಥ್ರಾಸ್ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರದ ಘಟನೆಯನ್ನು ಖಂಡಿಸುತ್ತೇನೆ. ಆರೋಪಿಗಳು ಯಾರೇ ಆಗಿದ್ದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲೇಬೇಕು. ಆದರೆ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳುವ ನೆಪದಲ್ಲಿ ರಾಜಕೀಯ ದುರ್ಬಳಕೆ ಮಾಡಿಕೊಳ್ಳುವ ಮನೋಭಾವನೆ ಸರಿಯಲ್ಲ. ಕಾಂಗ್ರೆಸ್ನದ್ದು ದನ ಸತ್ತರೆ ರಣ ಹದ್ದುಗಳನ್ನು ಕಾಯುವ ಮನಸ್ಥಿತಿ. ರಾಹುಲ್ ಗಾಂಧಿ ಸಾಂತ್ವನ ಹೇಳೋದಕ್ಕೆ ಹೊರಟಿರಲಿಲ್ಲ. ಬದಲಾಗಿ ಪ್ರದರ್ಶನ ಮಾಡೋದಕ್ಕೆ ಹೊರಟಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಆರೋಪಿಸಿದ್ದಾರೆ.