ಮದುವೆ ಮಂಟಪಕ್ಕೆ ಎತ್ತಿನ ಗಾಡಿಯಲ್ಲಿ ಬಂದ ಮದುಮಗಳು : ವಿಡಿಯೋ ವೈರಲ್ - ಮದುಮಗಳು ಸಾಂಪ್ರದಾಯ ನೆನಪಿಗಾಗಿ ಎತ್ತಿನ ಗಾಡಿಯಲ್ಲಿ ಬಂದ ಮದುಮಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14305336-thumbnail-3x2-bin.jpg)
ಉಡುಪಿ : ಮದುಮಗಳು ಮದುವೆ ಮಂಟಪಕ್ಕೆ ಎತ್ತಿನ ಗಾಡಿಯಲ್ಲಿ ಬಂದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಉಪ್ಪುಂದದ ಕಟ್ಟಿನಮನೆ ಬವಳಾಡಿ ಮಹಾಬಲ ಆಚಾರ್ಯರ ಪುತ್ರಿ ಪ್ರತಿಮಾ ಹಾಗೂ ಕಟ್ಟೆ ಬೆಲ್ತೂರು ಬಾಬು ಆಚಾರ್ಯ ಅವರ ಪುತ್ರ ಗುರುರಾಜ್ ವಿವಾಹ ಕಿರಿಮಂಜೇಶ್ವರದ ಆರ್ಕೆಡ್ ಚಿನ್ಮಯಿಯಲ್ಲಿ ನಡೆದಿತ್ತು. ಈ ವೇಳೆ ಮದುಮಗಳು ಸಾಂಪ್ರದಾಯದ ನೆನಪಿಗಾಗಿ ಎತ್ತಿನ ಗಾಡಿ ಮೂಲಕ ಬಂದಿದ್ದಾಳೆ. ಸದ್ಯ ಮದುಮಗಳ ಎತ್ತಿನ ಗಾಡಿ ಸವಾರಿ ಭಾರೀ ವೈರಲ್ ಆಗಿದೆ.