ಬ್ರಹ್ಮಗಿರಿಯ ಗಜಗಿರಿಬೆಟ್ಟ ಕುಸಿತ ಪ್ರಕರಣ: ಕಣ್ಮರೆಯಾದವರಿಗೆ ಒಂಬತ್ತು ದಿನಗಳಿಂದ ಶೋಧ..!
🎬 Watch Now: Feature Video
ಕೊಡಗು (ತಲಕಾವೇರಿ): ಕೊಡಗಿನ ತಲಕಾವೇರಿಯ ಗಜಗಿರಿ ಭೂಕುಸಿತದಿಂದ ಕಣ್ಮರೆಯಾದ ಐವರಲ್ಲಿ ಈಗಾಗಲೇ ಇಬ್ಬರ ಮೃತ ದೇಹಗಳು ದೊರೆತಿದ್ದು, ಇನ್ನುಳಿದ ಮೂವರಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ತೀವ್ರ ಶೋಧ ಮುಂದುವರೆಸಿದ್ದಾರೆ. ಕಳೆದ ಒಂಬತ್ತು ದಿನಗಳಿಂದ ಮೂರು ಜನ ಕಣ್ಮರೆಯಾದವರ ಪತ್ತೆಗೆ ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಇಂದು ಹಿಟಾಚಿಗಳ ಮೂಲಕ ನಿರಂತರವಾಗಿ ಹುಡುಕಾಟ ಮುಂದುವರೆದಿದೆ. ಆದರೆ ಮಂಜು ಕವಿದ ವಾತಾವರಣ ಹಾಗೂ ಪದೇ, ಪದೇ ಜಿನುಗುತ್ತಿರುವ ಮಳೆ ಕಾರ್ಯಚರಣೆಗೆ ಅಡ್ಡಿಯನ್ನು ಉಂಟುಮಾಡಿದೆ. ಈ ಬಗ್ಗೆ ಪ್ರತ್ಯಕ್ಷ್ಯ ವರದಿ ಇಲ್ಲಿದೆ.