ಬಿಜೆಪಿ ಪಾಳಯದಲ್ಲಿ ಸಂಭ್ರಮ; ರಮಡಾ ರೆಸಾರ್ಟ್ ಮುಂದೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ! - ವಿಶ್ವಾಸಮತಯಾಚನೆ
🎬 Watch Now: Feature Video
ಬೆಂಗಳೂರು: 14 ತಿಂಗಳ ಅಧಿಕಾರ ನಡೆಸಿದ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಇಂದು ವಿಶ್ವಾಸಮತಯಾಚನೆ ಮಾಡುವಲ್ಲಿ ಸೋಲು ಕಂಡಿದ್ದು,ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಶಾಸಕರು ರಮಡಾ ರೆಸಾರ್ಟ್ಗೆ ತೆರಳಿದ್ದು, ಅಲ್ಲಿ ಹೊನ್ನಳ್ಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಪಕ್ಷದ ಕಾರ್ಯಕರ್ತರೊಂದಿಗೆ ಸಖತ್ ಸ್ಟೇಪ್ ಹಾಕಿದ್ದಾರೆ.