ಆರ್.ಆರ್ ನಗರ ಉಪ ಸಮರ; ಗೆಲ್ಲುವ ಉತ್ಸಾಹದಲ್ಲಿ ನಾಮಪತ್ರ ಸಲ್ಲಿಸಿದ ಮುನಿರತ್ನ - RR Nagar Bypolls 2020
🎬 Watch Now: Feature Video
ಬೆಂಗಳೂರು : ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ಗೆ ಪ್ರತಿಷ್ಠೆಯಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೂರೂ ಪಕ್ಷದ ಹುರಿಯಾಳುಗಳು ಕಣಕ್ಕಿಳಿದ ಪರಿಣಾಮ ಉಪ ಚುನಾವಣಾ ಕಣ ರಂಗೇರಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದುಂಬಾಲು ಬಿದ್ದು ಕಡೆಗೂ ಟಿಕೆಟ್ ಪಡೆಯಲು ಸಫಲರಾದ ಮುನಿರತ್ನ ಚುನಾವಣೆಯಲ್ಲಿ ಗೆದ್ದಷ್ಟೇ ಸಂತಸಗೊಂಡಿದ್ದಾರೆ. ಬಿ.ಫಾರಂ ಸಿಕ್ಕ ಖುಷಿಯಲ್ಲಿ ಮುಂಜಾನೆಯೇ ಮತ್ತಿಕೆರೆಯಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಬಾವುರಾವ್ ದೇಶಪಾಂಡೆ ಭವನದಲ್ಲಿರುವ ಗಣೇಶನ ಗುಡಿಯಲ್ಲಿ ನಾಮಪತ್ರ ಮತ್ತು ಬಿ ಫಾರಂ ಎರಡಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಅಭ್ಯರ್ಥಿ ಮುನಿರತ್ನ ಪೂಜೆ ಸಲ್ಲಿಸಿದರು. ಇದೇ ವೆಳೆ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಸಹ ವ್ಯಕ್ತಪಡಿಸಿದರು.