ಮಂಗಳೂರು: ಮಾಸ್ಕ್ ಡೇ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಮರೆತ ಬಿಜೆಪಿ ಕಾರ್ಯಕರ್ತರು - ಮೆರವಣಿಗೆ ಆರಂಭಕ್ಕೂ ಮುನ್ನ ಉದ್ಘಾಟನೆ
🎬 Watch Now: Feature Video
ಇಂದು ರಾಜ್ಯಾದ್ಯಂತ ಮಾಸ್ಕ್ ಡೇ ಆಚರಣೆ ನಡೆಯುತ್ತಿದ್ದು, ಮಂಗಳೂರಿನಲ್ಲಿ ಬಿಜೆಪಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಸೇರಿದ್ದು ಕಂಡುಬಂತು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯ ಬಳಿ ಸಂಜೆ ಮಾಸ್ಕ್ ಡೇ ಆಚರಣೆ ಪ್ರಯುಕ್ತ ಮೆರವಣಿಗೆ ಆಯೋಜಿಸಿತ್ತು. ಮೆರವಣಿಗೆ ಆರಂಭಕ್ಕೂ ಮುನ್ನ ಉದ್ಘಾಟನೆಯ ವೇಳೆ ಬಿಜೆಪಿ ಕಚೇರಿ ಮುಂಭಾಗದಲ್ಲಿ ಸಾಮಾಜಿಕ ಅಂತರ ಮರೆತು ಕಾರ್ಯಕರ್ತರು ಒಟ್ಟು ಸೇರಿದ್ದರು.