ಬೆಂಗಳೂರಲ್ಲಿ ಭಯವಿಲ್ಲದೇ ಮತ್ತೆ ಬೈಕ್ ವ್ಹೀಲಿಂಗ್... ಬುದ್ಧಿ ಕಲಿಯದ ಯುವಕರಿಗೆ ತಕ್ಕ ಶಾಸ್ತಿ - Bike wheeling,
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4517080-802-4517080-1569138928996.jpg)
ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಆದ್ರೂ ಬುದ್ಧಿ ಕಲಿಯದ ಹುಡುಗರು ಹೆಬ್ಬಾಳ ರಿಂಗ್ ರೋಡಲ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಯ ಬಿಟ್ಟಿದ್ದರು. ಈ ವಿಷಯ ಪೊಲೀಸರ ಗಮನಕ್ಕೆ ಬಂದಿತ್ತು. ಕೂಡಲೇ ಕಾರ್ಯ ಪ್ರವೃತರಾದ ಪೊಲೀಸರು ಅಪಾಯಕಾರಿ ವ್ಹೀಲಿಂಗ್ ಮಾಡಿದ ಜಯಂತ್ ಹಾಗೂ ಅಕ್ರಮ್ನನ್ನು ಬಂಧಿಸಿದ್ದಾರೆ. ಬೈಕ್ ಸವಾರರ ವಿರುದ್ಧ ಐಪಿಸಿ ಸೆಕ್ಷನ್ 279ರಡಿ ಅಪಾಯಕಾರಿ ಚಾಲನೆ ಪ್ರಕರಣ ದಾಖಲಿಸಿ, ಬೈಕ್ ವಶಕ್ಕೆ ಪಡೆದ ಹೆಬ್ಬಾಳ ಸಂಚಾರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.