thumbnail

ಉಳ್ಳಾಲದಲ್ಲಿ ಬೈಕ್ ಕಳವು: ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆ...

By

Published : Oct 28, 2020, 10:33 PM IST

ಉಳ್ಳಾಲ: ಕಳ್ಳರಿಬ್ಬರು ಬೈಕ್ ಕಳವು ನಡೆಸಿರುವ ಘಟನೆ ಎರಡನೇ ಕೊಲ್ಯ ಗಂಗೂಸ್ ಕಿಚನ್ ಹೋಂ ಟು ಹೋಂ ಫುಡ್ ಡೆಲಿವರಿ ಸಂಸ್ಥೆಯಲ್ಲಿ ಮಂಗಳವಾರ ತಡರಾತ್ರಿ 1.48 ರ ವೇಳೆಗೆ ನಡೆದಿದೆ. ಕಳ್ಳರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಸ್ಥೆಗೆ ಸೇರಿದ ಹೊರಗಡೆ ನಿಲ್ಲಿಸಲಾದ ಹೀರೋ ಹೋಂಡ ಫ್ಯಾಷನ್ ಪ್ಲಸ್ ಬೈಕ್​ನ್ನು ಕಳವು ಮಾಡಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳರಿಬ್ಬರ ಚಹರೆ ಪತ್ತೆಯಾಗಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರನ್ನು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.