ಚಲಿಸುತ್ತಿದ್ದ ರೈಲಿಗೆ ಸಿಲುಕಿ ಪುಡಿಪುಡಿಯಾದ ಬೈಕ್; ಕ್ಷಣ ಮಾತ್ರದಲ್ಲಿ ಸವಾರ ಎಸ್ಕೇಪ್ - Latest Crime News 2020
🎬 Watch Now: Feature Video
ಹಾವೇರಿ: ಬೈಕ್ವೊಂದು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಪುಡಿಪುಡಿಯಾದ ಘಟನೆ ಹಾವೇರಿ ಸಮೀಪದ ನೆಲೋಗಲ್ ಗ್ರಾಮದ ಬಳಿ ನಡೆದಿದೆ. ಕ್ಷಣ ಮಾತ್ರದಲ್ಲಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತನ್ನ ವೇಗದೊಂದಿಗೆ ಬರುತ್ತಿದ್ದ ಜನಶತಾಬ್ಧಿ ರೈಲಿನ ಆಗಮನದ ಹೊರತಾಗಿಯೂ ಯುವಕ ಹಳಿ ದಾಟುತ್ತಿದ್ದ. ಈ ವೇಳೆ ಇನ್ನೇನು ರೈಲು ಬಂದು ಅಪ್ಪಳಿಸುತ್ತೆ ಅನ್ನುವಷ್ಟರಲ್ಲಿ ಸವಾರ ತನ್ನ ಬೈಕ್ ಬಿಟ್ಟು ಜಿಗಿದಿದ್ದಾನೆ. ಇದರಿಂದ ಬೈಕ್ ಸವಾರ ಸಾವಿನ ದವಡೆಯಿಂದ ಪಾರಾಗಿದ್ದು ಬೈಕ್ ಪುಡಿ ಪುಡಿಯಾಗಿದೆ. ವಿಷಯ ತಿಳಿದು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಿಂದ ರೈಲು ಐದು ನಿಮಿಷ ನಿಂತು ನಂತರ ಪಯಣ ಆರಂಭಿಸಿತು