ಬಿಸಿಲ ಝಳಕ್ಕೆ ಹೊತ್ತಿ ಉರಿದ ಬೈಕ್.. ಸ್ವಲ್ಪದರಲ್ಲೇ ದಂಪತಿ - ಮಕ್ಕಳು ಪಾರು! - ಯಾದಗಿರಿ
🎬 Watch Now: Feature Video
ಯಾದಗಿರಿ: ಬಿಸಿಲಿನ ತಾಪ ಹೆಚ್ಚಾದ ಕಾರಣ ಬೈಕ್ವೊಂದು ಇದ್ದಕ್ಕಿದ್ದಂತೆ ಹೊತ್ತಿ ಉರಿದಿರುವ ಘಟನೆ ಜರುಗಿದೆ. ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದ ಹೊರ ವಲಯದ ಕಾಲುವೆ ಬಳಿ ಘಟನೆ ನಡೆಸಿದ್ದು, ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ದಂಪತಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಅನ್ವರ ಗ್ರಾಮದಿಂದ ವಡಗೇರಾ ಪಟ್ಟಣಕ್ಕೆ ಬೈಕ್ನಲ್ಲಿ ದಂಪತಿ, ಮಕ್ಕಳ ತೆರಳುವ ವೇಲೆ ಬೈಕ್ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸವಾರ ಬೈಕ್ ನಿಲ್ಲಿಸಿದ ಪರಿಣಾಮ ಅನಾಹುತ ತಪ್ಪಿದಂತಾಗಿದೆ. ಬೈಕ್ಗೆ ಹತ್ತಿದ ಬೆಂಕಿ ನಂದಿಸಲು ದಂಪತಿ ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಬೈಕ್ ಸುಟ್ಟು ಭಸ್ಮವಾಗಿದೆ.ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.