ಭದ್ರಾವತಿಯಲ್ಲಿ ಸಿಎಂ ಇಬ್ರಾಹಿಂ ವಿರುದ್ಧ ಭಜರಂಗದಳದಿಂದ ಪ್ರತಿಭಟನೆ - ಭದ್ರಾವತಿಯಲ್ಲಿ ಸಿಎಂ ಇಬ್ರಾಹಿಂ ವಿರುದ್ಧ ಭಜರಂಗದಳದಿಂದ ಪ್ರತಿಭಟನೆ
🎬 Watch Now: Feature Video
ಭದ್ರಾವತಿಯಲ್ಲಿ ಭಜರಂಗದಳದ ವತಿಯಿಂದ ಎಂಎಲ್ಸಿ ಸಿಎಂ ಇಬ್ರಾಹಿಂ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಅಧಿವೇಶನದಲ್ಲಿ ಸಿಎಂ ಇಬ್ರಾಹಿಂ ಜೈ ಶ್ರೀರಾಮ ಅನ್ನುವ ಬದಲು, ಸಿಡಿರಾಮ್ ಎನ್ನುವ ಮೂಲಕ ಶ್ರೀರಾಮಚಂದ್ರನಿಗೆ ಅಪಮಾನ ಮಾಡಿದ್ದಾರೆ.ಬಹುಸಂಖ್ಯಾತರ ಆರಾಧ್ಯ ದೈವ ಪ್ರಭು ಶ್ರೀರಾಮ ಚಂದ್ರರಿಗೆ ಸಿಎಂ ಇಬ್ರಾಹಿಂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಭದ್ರಾವತಿ ಭಜರಂಗದಳದ ಕಾರ್ಯಕರ್ತರು ಪಟ್ಟಣದ ರಂಗಪ್ಪ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿತು. ಸಿಎಂ ಇಬ್ರಾಹಿಂ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಲಾಯಿತು.