thumbnail

By

Published : Apr 15, 2019, 11:48 PM IST

ETV Bharat / Videos

ಪಿಯುಸಿಯಲ್ಲಿ ಕಲಬುರಗಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಉತ್ತಮ ಸಾಧನೆ

ಕಲಬುರಗಿ: ಶ್ರೀ ಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ನಿಖಿತ್ ಸಾಲೆಹಾ 586 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದ ನಿಖಿತ್ ಕೆಮೆಸ್ಟ್ರಿ, ಫಿಸಿಕ್ಸ್ ಮತ್ತು ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ. ಇನ್ನುಳಿದಂತೆ ಬಯೋಲಜಿಯಲ್ಲಿ 98, ಇಂಗ್ಲಿಷ್​ 92, ಹಿಂದಿಯಲ್ಲಿ 96 ಅಂಕ ಪಡೆದು, ಒಟ್ಟು 586 ಅಂಕದೊಂದಿಗೆ ಶೇ. 97.6ರಷ್ಟು ಅಂಕ ಪಡೆದಿದ್ದಾರೆ. ಮೆಡಿಕಲ್ ಓದುವ ಗುರಿ ಹೊಂದಿರುವ ನಿಖಿತ್ ಮುಂದಿನ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತನ್ನ ಸಾಧನೆಗೆ ತಂದೆ ತಾಯಿ ಹಾಗೂ ಕಾಲೇಜಿನ ಉಪನ್ಯಾಸಕರು ಕಾರಣರೆಂದು ಕೃತಜ್ಞತೆ ಸಲ್ಲಿಸಿದ್ದಾರೆ ನಿಖಿತ್​. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜು ಸಂಸ್ಥಾಪಕರೂ ಆದ ಪ್ರಾಂಶುಪಾಲಕ ಎ.ವೈ. ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.