ಗಾಂಧಿ ಜಯಂತಿ ದಿನ ಉತ್ತಮ ಗ್ರಾಮ ಪಂಚಾಯತಿ ಪ್ರಶಸ್ತಿ ವಿತರಣೆ: ಈಶ್ವರಪ್ಪ - latest shimoga news
🎬 Watch Now: Feature Video
ರಾಜ್ಯದಲ್ಲಿ 175 ತಾಲೂಕುಗಳಿದ್ದು, ತಾಲೂಕಿನ ಒಂದು ಗ್ರಾಮ ಪಂಚಾಯತಿಗೆ ಉತ್ತಮ ಗ್ರಾಮ ಪಂಚಾಯತಿ ಎಂದು ಪ್ರಶಸ್ತಿಯನ್ನು ನಮ್ಮ ಇಲಾಖೆಯಿಂದ ನೀಡುತ್ತಾ ಬರಲಾಗುತ್ತಿದೆ. ಈ ಬಾರಿ ಅಕ್ಟೋಬರ್ 2ರಂದು ಪ್ರಶಸ್ತಿಯನ್ನು ಬೆಂಗಳೂರಿನ ಬ್ಯಾಂಕ್ವೇಟ್ ಹಾಲ್ನಲ್ಲಿ ವಿತರಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ. ಉತ್ತಮ ಗ್ರಾಮ ಪಂಚಾಯತ್ ಆಯ್ಕೆಗೆ 300 ಕಂಡೀಷನ್ಗಳಿದ್ದು, ಇದರಲ್ಲಿ ಪಾಸ್ ಆದ ಪಂಚಾಯತ್ಗೆ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಸುಮಾರು 2,500 ಕೋಟಿ ರೂ ಬರಬೇಕಿತ್ತು. ಆದರೀಗ ಕೇಂದ್ರದಿಂದ 900 ಕೋಟಿ ರೂ. ಬಂದಿದೆ ಎಂದರು.