ನವಜೋಡಿಯ ಬೀಚ್ ಸ್ವಚ್ಛ ಕಾರ್ಯ.. ಜನಮನ್ನಣೆ ಗಳಿಸಿದ ಉಡುಪಿಯ ದಂಪತಿ! - Udupi Beach cleaning by new wed News
🎬 Watch Now: Feature Video
ಉಡುಪಿ: ಮದುವೆ ಆದ ಬಳಿಕ ಜೋಡಿ ಹನಿಮೂನ್ಗೆ ಹೋಗೋದು ಸಾಮಾನ್ಯ. ಆದ್ರೆ, ಇಲ್ಲೊಂದು ನವಜೋಡಿ ಮದುವೆ ಮುಗಿಸಿ ಬಿಂದಾಸಾಗಿ ಹನಿಮೂನ್ಗೆ ಹೋಗೋದು ಬಿಟ್ಟು ಪೊರಕೆ, ಚೀಲ ಹಿಡಿದು ಬೀಚ್ಗಳಲ್ಲಿ ಕಸ ಆಯ್ದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಹೆಸರು ಅನುದೀಪ್ ಹೆಗಡೆ. ಡಿಜಿಟಲ್ ಮಾರ್ಕೆಟಿಂಗ್ ಕೆಲಸ ಮಾಡುವ ಇವರು ಬಾಳಸಂಗಾತಿಯಾಗಿ ಆಯ್ದುಕೊಂಡಿದ್ದು ಫಾರ್ಮಸಿಟಿಕಲ್ ಉದ್ಯೋಗಿಯಾಗಿರುವ ಮಿನುಷ ಕಾಂಚನ್ ಅವರನ್ನು. ಮದುವೆ ಮುಗಿಸಿ ಸಮಾಜಕ್ಕೆ ಮಾದರಿಯಾಗಬಹುದಾದ ಏನಾದರೂ ಕೆಲಸ ಮಾಡೋಣವೇ ಎಂದು ಯೋಚಿಸಿದಾಗ ಅವರಿಗೆ ತಕ್ಷಣ ಹೊಳೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ಕನಸು. ಈ ಹಿನ್ನೆಲೆ ಸ್ವಚ್ಛತೆಗೆ ಮುಂದಾದ ಜೋಡಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
Last Updated : Dec 8, 2020, 7:09 PM IST