ಆದಷ್ಟು ಬೇಗ ಎಲ್ಲ ಮೀಸಲಾತಿ ಬೇಡಿಕೆಗಳ ಈಡೇರಿಕೆಗೆ ಕ್ರಮ: ಯತ್ನಾಳ್​​ ಪ್ರಶ್ನೆಗೆ ಬೊಮ್ಮಾಯಿ ಉತ್ತರ

🎬 Watch Now: Feature Video

thumbnail
ಪಂಚಮಸಾಲಿ ಸಮಾಜವನ್ನು 3ಬಿ ವರ್ಗದಿಂದ ಹಿಂದುಳಿದ ವರ್ಗಕ್ಕೆ ಸೇರಿಸಿ ಮೀಸಲಾತಿ ಹೆಚ್ಚಿಸುವ ಕುರಿತು ಇಂದು ಸದನದಲ್ಲಿ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಮಾತನಾಡಿದ್ರು. ಕರ್ನಾಟಕದಲ್ಲಿ ನಾವು ಶೇ. 32 ಮೀಸಲಾತಿ ನೀಡಿದ್ದರೂ ಇಲ್ಲಿವರೆಗೂ ಯಾರು ಹಿಂದುಳಿದ ವರ್ಗಕ್ಕೆ ಸೇರಿಲ್ಲವೋ ಆ ಸಮಾಜ ಈಗ ಪುರಾವೆ ಸಮೇತ ಬಂದು ಮೀಸಲಾತಿ ಕೇಳುತ್ತಿದೆ. ಇಂದ್ರಾ ಸಹಾನಿ ಕೇಸ್​ನಲ್ಲಿ ಸುಪ್ರೀಂಕೋರ್ಟ್​ ತೀರ್ಪಿನಂತೆ ಎಲ್ಲಾ ರಾಜ್ಯಗಳು ಶೇ. 50 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ನೀಡುವಂತಿಲ್ಲ. ಆದರೆ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಮೀಸಲಾತಿ ಪ್ರಮಾಣ ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಈ ಕುರಿತಂತೆ ಅಭಿಪ್ರಾಯ ತಿಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಸೂಚಿಸಿದೆ. ಇನ್ನು ಪಂಚಮಸಾಲಿ ಸಮಾಜ ಈಗಾಗಲೇ 3ಬಿ ವರ್ಗದಲ್ಲಿದ್ದು, ಸದ್ಯ 2ಎಗೆ ಸೇರಿಸುವಂತೆ ಒತ್ತಾಯಿಸಿದೆ. ಆದರೆ ಈ ಕುರಿತು ಸಮಗ್ರ ಅಧ್ಯಯನ, ಹಾಗೂ ಅಂಕಿ- ಅಂಶಗಳ ಸಂಗ್ರಹಣೆ ಮಾಡಲು ಸಮಯಾವಕಾಶ ಬೇಕು. ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವ ಕುರಿತಂತೆ ಈ ಹಿಂದುಳಿದ ವರ್ಗಗಳ ಕಮಿಷನ್​ಗೆ ಈಗಾಗಲೇ ಶಿಫಾರಸು ಮಾಡಲಾಗಿದೆ ಎಂದು ಬಸವರಾಜ್​ ಬೊಮ್ಮಾಯಿ ತಿಳಿಸಿದ್ರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಿಂದುಳಿದ ವರ್ಗಗಳ ಕಮಿಷನ್​ಗೆ ಶಿಫಾರಸು ಮಾಡದೇ ಹಿಂದುಳಿದ ವರ್ಗಕ್ಕೆ ಸೇರಿಸಲ್ಪಟ್ಟ ಸಮಾಜಗಳ ಕುರಿತು ಮಾಹಿತಿ ನೀಡಿ ಎಂದರು. ಈ ವೇಳೆ ಸ್ವಲ್ಪ ಕಾಲಾವಕಾಶ ನೀಡುವಂತೆ ಗೃಹ ಸಚಿವರು ಮನವಿ ಮಾಡಿದರು. ಅಂತಿಮವಾಗಿ ಈ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ಶೀಘ್ರ ಅಂದರೆ ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. ಆದರೆ ಇದರಿಂದ ಯತ್ನಾಳ್​ ಸಮಾಧಾನಗೊಳ್ಳಲಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.