ಬ್ಯಾಂಕ್ ನೌಕರರ ಮುಷ್ಕರ: ಮಧ್ಯಾಹ್ನದ ವೇಳೆಗೆ ಎಟಿಎಂಗಳು ಬಂದ್ - ಬ್ಯಾಂಕ್ ನೌಕರರ ಮುಷ್ಕರ

🎬 Watch Now: Feature Video

thumbnail

By

Published : Jan 31, 2020, 5:48 PM IST

ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್​ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ಬಿಸಿ ಗದಗ ಜಿಲ್ಲೆಗೂ ತಟ್ಟಿದೆ. ಕಳೆದ ಎರಡು ವರ್ಷಗಳಿಂದ ವೇತನ ಪರಿಷ್ಕರಣೆಗೊಳ್ಳದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಇಂದಿನಿಂದ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಮಾಡಿದ್ದು, ವ್ಯಾಪಾರ-ಉದ್ದಿಮೆಗಳು ಸೇರಿದಂತೆ ಜನ ಸಾಮಾನ್ಯರು ಸಾಕಷ್ಟು ಪರದಾಡುತ್ತಿದ್ದಾರೆ. ಬಂದ್​ನ ಮೊದಲ ದಿನವಾದ ಇಂದು ಕೆಲವು ಎಟಿಎಂಗಳು ಮಧ್ಯಾಹ್ನ ವೇಳೆಗೆ ಬಂದ್ ಆಗಿದ್ದವು. ಹಣ ತೆಗೆದುಕೊಳ್ಳಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಸಾಕಷ್ಟು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.