ಬೇಡ ಬೇಡ ಅಂದ್ರು ಗುಂಪು ಸೇರ್ತಾರೆ... ಬೆಂಗಳೂರಿಗರಿಗೆ ಪ್ರಾಣಕ್ಕಿಂತ ಹಬ್ಬವೇ ಮುಖ್ಯವಾಯ್ತೇ!
🎬 Watch Now: Feature Video
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸರ್ಕಾರ ಮಾರ್ಚ್ 31ರ ತನಕ ರಾಜ್ಯವನ್ನು ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದೆ. ಆದರೆ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಬೆಂಗಳೂರು ಜನರು ಮನೆಯಿಂದ ಹೊರಬಂದು ಸರ್ಕಾರಕ್ಕೆ ತಲೆನೋವಾಗಿದ್ದಾರೆ. ಮುಖ್ಯಮಂತ್ರಿ ಮನವಿಗೂ ಸ್ಪಂದಿಸದ ಬೆಂಗಳೂರು ಮಂದಿ ನಾಳೆ ಇರುವ ಯುಗಾದಿ ಹಬ್ಬದ ಆಚರಣೆಗಾಗಿ ವಸ್ತುಗಳನ್ನು ಖರೀದಿಸಲು ಮಾರ್ಕೆಟ್ಗೆ ಬಂದು ಗುಂಪುಗುಂಪಾಗಿ ಸೇರುತ್ತಿದ್ದಾರೆ.