ತುಂಬಿ ಹರಿದ ಪುರಾತನ ದರೋಜಿ ಕೆರೆ.. ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಜಲಧಾರೆ
🎬 Watch Now: Feature Video
ಹೊಸಪೇಟೆ: ಪುರಾತನ ಕಾಲದ ದರೋಜಿ ಕೆರೆ ತುಂಬಿ ಕೋಡಿ ಬಿದ್ದಿದೆ. ಹರಿಯುತ್ತಿರುವ ನೀರಿನ ಮನಮೋಹಕ ದೃಶ್ಯ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಜಲಧಾರೆಯ ಝುಳು ಝುಳು ನಾದ ಮನಸ್ಸಿಗೆ ಮುದ ನೀಡುತ್ತದೆ. 3 ಕಿ.ಮೀ.ಗಿಂತ ಹೆಚ್ಚು ವಿಸ್ತಾರವನ್ನು ಈ ಕೆರೆ ಹೊಂದಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಈ ಕೆರೆಯನ್ನು ಅಭಿವೃದ್ಧಿ ಪಡಿಸಿರುವ ಮಾಹಿತಿ ಇತಿಹಾಸದಲ್ಲಿ ದಾಖಲಾಗಿದೆ. ನಾಲ್ಕು ತೂಬುಗಳು ಈ ಕೆರೆಗೆ ಇದ್ದು, ಕೃಷಿ ಹಾಗೂ ಮೀನುಗಾರಿಕೆಗೆ ಕೆರೆ ಆಸರೆಯಾಗಿದೆ.