WATCH: ವರುಣಾರ್ಭಟಕ್ಕೆ ರಸ್ತೆಗಳು ಜಲಾವೃತ, ತಳ್ಳಿಕೊಂಡು ನೀರಿನಿಂದ ಆಂಬ್ಯುಲನ್ಸ್ ಹೊರತಂದ ಜನ - Ambulance stuck in water at Chikkaballapura
🎬 Watch Now: Feature Video

ಚಿಕ್ಕಬಳ್ಳಾಪುರ: ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಕೆಲವು ಪ್ರದೇಶಗಳು ಜಲಾವೃತವಾಗಿವೆ. ವರುಣಾರ್ಭಟದಿಂದ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಮಾನಿ ಭೈರಸಾಗರ ಕೆರೆ ಕೋಡಿ ತುಂಬಿ ಹರಿಯುತ್ತಿದೆ. ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ವೇಳೆ ಒಂದು ಆಂಬ್ಯುಲೆನ್ಸ್ ನೀರಿನಲ್ಲಿ ಸಿಲುಕಿತ್ತು. ನೀರಲ್ಲಿ ವಾಹನ ಇಳಿಸಿದ ಕಾರಣ ಆಂಬ್ಯುಲನ್ಸ್ ಸ್ಟಾರ್ಟ್ ಆಗಲು ತೊಂದರೆ ಉಂಟಾಯಿತು. ಹಾಗಾಗಿ ಸಾರ್ವಜನಿಕರು ತಳ್ಳಿಕೊಂಡು ಆಂಬ್ಯಲೆನ್ಸ್ನ್ನು ನೀರಿನಿಂದ ಹೊರತಂದ ಘಟನೆ ಜರುಗಿದೆ.