ಬಾಣಂತಿ ಸಾವು ಪ್ರಕರಣ- ಆರೋಪ ಮುಕ್ತರಾದ ವೈದ್ಯಾಧಿಕಾರಿ: ಸಾವಿನ ಕಾರಣ ಬಹಿರಂಗಕ್ಕೆ ಕುಟುಂಬಸ್ಥರ ಪಟ್ಟು! - ವೈದ್ಯಾಧಿಕಾರಿ
🎬 Watch Now: Feature Video
ಕಾರವಾರ: ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರವಾರದ ಬಾಣಂತಿ ಸಾವು ಪ್ರಕರಣ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ಸಹ ನಡೆಸಿದ್ದು, ಪ್ರಕರಣದ ತನಿಖೆಗೆ ತಂಡವನ್ನೂ ರಚಿಸಲಾಗಿತ್ತು. ಇದೀಗ ಸಲ್ಲಿಕೆಯಾಗಿರುವ ತನಿಖಾ ವರದಿ ವೈದ್ಯರನ್ನ ಆರೋಪ ಮುಕ್ತಗೊಳಿಸಲಾಗಿದೆ.