ಕೊರೊನಾ ನಿರ್ಮೂಲನೆಗೆ ಎಲ್ಲ ಪಕ್ಷಗಳೂ ಕೈಜೋಡಿಸಬೇಕು: ಪಲಿಮಾರು ಸ್ವಾಮೀಜಿ - udupi
🎬 Watch Now: Feature Video
ಉಡುಪಿ: ಕೊರೊನಾ ನಿರ್ಮೂಲನೆಗೆ ಎಲ್ಲ ಪಕ್ಷಗಳೂ ಕೈ ಜೋಡಿಸಬೇಕು. ಈ ಮೂಲಕ ಕೊರಾನಾ ಸೋಂಕನ್ನು ದೇಶದಿಂದಲೇ ನಿರ್ಮೂಲನೆ ಮಾಡಬೇಕಾಗಿದೆ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು. ವ್ಯಾಕ್ಸಿನ್ ಸ್ವೀಕಾರ ಮಾಡುವುದು ಅಥವಾ ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ಎಲ್ಲರೂ ಕೈಜೋಡಿಸಿವೆ. ಕೊರೊನಾ ಸೋಂಕು ವಿಚಾರದಲ್ಲಿ ಎಲ್ಲ ಪಕ್ಷಗಳು ಪಕ್ಷ ಭೇದ ಮರೆತು ಮಾಡುತ್ತಿವೆ. ಕೊರೊನಾ ಸಮಸ್ಯೆಗೆ ಆ್ಯಂಬುಲೆನ್ಸ್ ಸೇವೆ ಇರಬಹುದು. ಸಹಾಯವಾಣಿ ಇರಬಹುದು. ಈ ಎಲ್ಲ ಸೇವೆಯನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಮತ್ತು ಜನರು ಒಟ್ಟಾಗಿ ಕೆಲಸ ಮಾಡಿದರೆ ಈ ಕಾಯಿಲೆಯನ್ನು ಆದಷ್ಟೂ ಬೇಗ ಹಿಮ್ಮೆಟ್ಟಿಸಬಹುದು ಎಂದು ಪಲಿಮಾರು ಸ್ವಾಮೀಜಿ ಸಂದೇಶ ನೀಡಿದ್ದಾರೆ.