ಕೋವಿಡ್ ಮುಂಜಾಗ್ರತೆ: ಹಾವೇರಿಯಲ್ಲಿ ಎಲ್ಲಾ ಸಂತೆಗಳು ಮುನ್ಸಿಪಲ್ ಮೈದಾನಕ್ಕೆ ಸ್ಥಳಾಂತರ - ಹಾವೇರಿಯಲ್ಲಿ ಸಂತೆಗಳು ಸ್ಥಳಾಂತರ

🎬 Watch Now: Feature Video

thumbnail

By

Published : Apr 24, 2021, 9:11 AM IST

ಹಾವೇರಿ : ಕೊರೊನಾ ಹರಡುವಿಕೆಯಿಂದ ಎಚ್ಚೆತ್ತ ಜಿಲ್ಲಾಡಳಿತ ನಗರದಲ್ಲಿರುವ ಎಲ್ಲಾ ತರಕಾರಿ ಸಂತೆಗಳನ್ನು ರದ್ದು ಮಾಡಲಾಗಿದೆ. ಬಸವೇಶ್ವರನಗರದ ಮುನ್ಸಿಪಲ್ ಮೈದಾನದಲ್ಲಿ ವಿಶಾಲವಾದ ಸಂತೆಗೆ ಅವಕಾಶ ನೀಡಲಾಗಿದೆ. ಈ ಮೈದಾನದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವರ್ತಕರು ಮತ್ತು ಗ್ರಾಹಕರು ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿದೆ. ನಗರಸಭೆ ಅಧ್ಯಕ್ಷ ಸಂಜೀವಕುಮಾರ್ ಜಿಲ್ಲಾಡಳಿತಕ್ಕೆ ಈ ಕುರಿತಂತೆ ಮನವಿ ಮಾಡಿದ ಹಿನ್ನೆಲೆ ಈ ಕ್ರಮ ಕೈಗೊಂಡಿದೆ. ಬಾಕ್ಸ್​ಗಳಲ್ಲಿ ತರಕಾರಿ ಇಟ್ಟುಕೊಂಡು ವ್ಯಾಪಾರಸ್ಥರು ವ್ಯಾಪಾರಕ್ಕೆ ಸಿದ್ಧರಾಗಿದ್ದಾರೆ. ಆದರೆ, ಇಂದು ವೀಕೆಂಡ್ ಕರ್ಫ್ಯೂ ಹಿನ್ನೆಲೆ ಸಂತೆಯಲ್ಲಿ ಅಷ್ಟೊಂದು ಜನ ಕಂಡು ಬರುತ್ತಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.