ಗದಗದಲ್ಲಿ ಮತ್ತೆ ವರುಣನ ಆರ್ಭಟ... ತುಂಬಿ ಹರಿದ ಹಳ್ಳ-ಕೊಳ್ಳಗಳು! - ಸಂಪರ್ಕ ಕಡಿತ
🎬 Watch Now: Feature Video
ಗದಗ: ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದಷ್ಟೆ ಬಂದಿದ್ದ ಪ್ರವಾಹಕ್ಕೆ ನೂರಾರು ಗ್ರಾಮಗಳು ಮುಳುಗಿವೆ. ಈಗ ಮತ್ತೆ ಎರಡು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಗುರುವಾರವೂ ವಿವಿಧೆಡೆ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಟಗಿ ಗ್ರಾಮದಿಂದ ಗಜೇಂದ್ರಗಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ. ದುಂದೂರು ಗ್ರಾಮದ ಬಳಿಯ ರೈಲ್ವೆ ಅಂಡರ್ ಪಾಸ್ನಲ್ಲಿಯೂ ನೀರು ನಿಂತಿದೆ. ಪ್ರಸ್ತುತ ಈ ಗ್ರಾಮಕ್ಕೆ ತೆರಳಲು 8 ಕಿಲೋ ಮೀಟರ್ ಸುತ್ತಿಕೊಂಡು ಹೋಗಬೇಕಿದೆ.