ರಾಗಿಣಿ ನನ್ನ ಪಾಲಿಗೆ ದೇವತೆ... ಅವಳಿಗಾಗಿ ಪ್ರಾಣ ಕೊಡಲು ಸಿದ್ಧ ಎಂದ ಅಭಿಮಾನಿ! - ರಾಗಿಣಿ ಅಭಿಮಾನಿ ಸುಧಾಕರ
🎬 Watch Now: Feature Video
ಚಿತ್ರದುರ್ಗ: ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಜೈಲು ಸೇರಿರುವ ನಟಿ ರಾಗಿಣಿಗೆ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದಿರುವ ಅಭಿಮಾನಿವೋರ್ವನ ವಿಡಿಯೋ ವೈರಲ್ ಆಗಿದೆ. ಹಿರಿಯೂರಿನ ಸುಧಾಕರ್ ಎಂಬಾತ, ನಟಿ ರಾಗಿಣಿ ನನ್ನ ದೇವತೆ, ಕನಸಿನ ರಾಣಿ. ಅವಳಿಗಾಗಿ ನಾನು ರಕ್ತ, ಪ್ರಾಣ ಕೊಡಲು ಸಿದ್ಧ. ರಾಗಿಣಿಯನ್ನು ಡ್ರಗ್ಸ್ಗೆ ಅಡಿಕ್ಟ್ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದಿದ್ದಾನೆ. ನಾನು ಆರ್ಟಿಐ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಸುಧಾಕರ್, ಡ್ರಗ್ಸ್ ದಂಧೆಯಲ್ಲಿ ಸಾಕಷ್ಟು ರಾಜಕಾರಣಿಗಳು ಭಾಗಿಯಾಗಿದ್ದಾರೆ. ಅವರ ದಾಖಲೆಗಳನ್ನು ಆರ್ಟಿಐನಿಂದ ಹೊರತೆಗೆದು ಹೋರಾಟ ಮಾಡ್ತೀನಿ ಎಂದು ಸುಧಾಕರ್ ಹೇಳಿದ್ದಾನೆ. ಸದ್ಯ, ಈ ಸುಧಾಕರ್ ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.