ಶಿವಮೊಗ್ಗದಲ್ಲಿ ದಸರಾ ಚಲನ ಚಿತ್ರೋತ್ಸವಕ್ಕೆ ನಟಿ ಭಾವನಾ ರಾವ್ ಚಾಲನೆ.. - ದಸರಾ ಚಲನ ಚಿತ್ರೋತ್ಸವ
🎬 Watch Now: Feature Video
ಶಿವಮೊಗ್ಗ:ಮಹಾನಗರ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿ ಮಂಡಲ, ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ದಸರಾ ಚಲನ ಚಿತ್ರೋತ್ಸವ ಕಾರ್ಯಕ್ರಮವನ್ನು ನಗರದ ಮಂಜುನಾಥ ಚಿತ್ರ ಮಂದಿರದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಟಿ ಭಾವನ ರಾವ್ ಉದ್ಘಾಟಿಸಿದರು. ದಸರಾ ಚಲನ ಚಿತ್ರೋತ್ಸವವು ಐದು ದಿನಗಳ ಕಾಲ ನಡೆಯಲಿದ್ದು, ಪ್ರತಿದಿನ 8.30ಕ್ಕೆ ಚಿತ್ರಗಳ ಉಚಿತ ಪ್ರದರ್ಶನ ನಡೆಯಲಿವೆ. ಇಂದು ಮೊದಲನೆ ದಿನ ಬೆಲ್ ಬಾಟಂ ಚಿತ್ರವನ್ನು ಪ್ರದರ್ಶನ ಮಾಡಲಾಯಿತು. ನಟ ಸಾರ್ವಭೌಮ, ಪ್ರೀಮಿಯರ್ ಪದ್ಮಿನಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹಾಗೂ ನಾತಿಚರಾಮಿ ಚಿತ್ರಗಳು ಪ್ರತಿದಿನ ಪ್ರದರ್ಶನ ಕಾಣಲಿವೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದಯೋನ್ಮುಖ ನಟಿ ದಿವ್ಯ ಉರುಡುಗ ಹಾಗೂ ವಿಹಾರಿಗೌಡ ಕಿರುತೆರೆ ನಟಿ ಹಾಗೂ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ರು.