ಅಹಂ ಬೇಡ, ನಾನು ನಾನು ಅನ್ನೋದು ಬೇಡ.. ಸುದ್ದಿಗೋಷ್ಠಿ ವೇಳೆ ಜಗ್ಗೇಶ್ ಮಾತು! - Actor jaggesh news
🎬 Watch Now: Feature Video
ನಟ ಜಗ್ಗೇಶ್ಗೆ ದರ್ಶನ್ ಅಭಿಮಾನಗಳ ಮುತ್ತಿಗೆ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿ ನಟ ಜಗ್ಗೇಶ್ ಮಾಹಿತಿ ಹಂಚಿಕೊಂಡರು. ಅತ್ತಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೊಡ್ಡ ನಟನನ್ನು ಸಣ್ಣ ನಟಿ ಮನೆಯಲ್ಲಿ ನಿಲ್ಲಿಸಿದ್ದರು. ಆ ವೇಳೆ, ಸಹಾಯಕ್ಕೆ ಹೋಗಿದ್ದು ನಾನು ಎಂದ ಜಗ್ಗೇಶ್, ಅಂದು ಪೊಲೀಸರು ಆತನನ್ನು ಬರಿ ಗಾಲಿನಲ್ಲಿ ನಿಲ್ಲಿಸಿದ್ದರು ಎಂದರು. ಆ ವೇಳೆ, ಅವರ ಸಹಾಯಕ್ಕೆ ಹೋಗಿದ್ದು ನಾನು. ಆತನನ್ನು ಪೊಲೀಸ್ ಠಾಣೆಯಿಂದ ಕಳುಹಿಸಿ ಎಂದು ಹೇಳಿದ್ದು ನಾನು ಎಂದಿದ್ದಾರೆ. ಸಿನಿಮಾ ರಂಗದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದೇನೆ. ಒಗ್ಗಟ್ಟು ಇದ್ದರೆ ಸಂಕಷ್ಟ ಇರುವುದಿಲ್ಲ. ನಾನು ಚಿತ್ರ ಮಂದಿರದ ಮಾಲೀಕನೂ ಆಗಿದ್ದೆ. ಚಿತ್ರರಂಗದ ಹಣೆಬರಹ ನನಗೆ ಗೊತ್ತಿದೆ. ನಾನು ಚಿತ್ರರಂಗಕ್ಕಾಗಿ ಸಾಕಷ್ಟು ದುಡಿದಿದ್ದೇನೆ ಎಂದರು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ಈ ಪರಿಸ್ಥಿತಿಯನ್ನು ಯಾರೂ ಊಹಿಸಿರಲಿಲ್ಲ. ಯಾವುದೇ ವಿಷಯವನ್ನು ಅಳೆದು ತೂಗಿ ವಿಶ್ಲೇಷಣೆ ಮಾಡಬೇಕು. ಗಲಾಟೆ ನಡೆಸಲು ಹುನ್ನಾರ ನಡೆಸಲಾಗಿತ್ತು ಎಂದರು.