ಸಿನಿಮಾ ಗೀತೆ ಮೂಲಕ ಅಭಿಮಾನಿಗಳನ್ನು ರಂಜಿಸಿದ ನಟ ಜಗ್ಗೇಶ್ - ಚಿತ್ರನಟ ಜಗ್ಗೇಶ್
🎬 Watch Now: Feature Video
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮೂವರು ಅಂಧ ಗಾಯಕಿಯರ ಮನೆ ದುರಸ್ತಿಪಡಿಸಿ ಅವರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ, ಚಿತ್ರ ನಟ ಜಗ್ಗೇಶ್ ಹಾಡು ಹಾಡುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಜನ್ಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ ಎಂದು ಹಾಡು ಶುರು ಮಾಡುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹೊಡೆದು ಖುಷಿಪಟ್ಟರು.