ಪಾಲಿಕೆ ಚುನಾವಣೆ ವೇಳೆ ಬೇಡ ಅಂದ್ರೂ ಮಹಿಳೆಗೆ ಹಣ ಕೊಟ್ಟ ಕಾಂಗ್ರೆಸ್ ಕಾರ್ಯಕರ್ತ... ವಿಡಿಯೋ ವೈರಲ್ - ಮತದಾನದ ವೇಳೆ ಮಹಿಳೆಗೆ ಕಾಂಗ್ರೆಸ್ ಕಾರ್ಯಕರ್ತ ಹಣದ ಆಮಿಷವೊಡ್ಡಿದ ಆರೋಪ
🎬 Watch Now: Feature Video
ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯ ಮತದಾನದ ವೇಳೆ ಬಲವಂತವಾಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮಹಿಳೆಗೆ ಹಣ ಕೊಡಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿರುವ ವಿಡಿಯೋ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ಮಹಿಳೆಗೆ ತಗೊಳ್ಳಿ ಮೇಡಂ ಎಂದು ಕಾರ್ಯಕರ್ತ ಹೇಳುತ್ತಿದ್ದರೂ ಆ ಮಹಿಳೆ ಮಾತ್ರ ಕೈ ಮುಗಿದು ಹಣ ನನಗೆ ಬೇಡ ಎನ್ನುತ್ತಾರೆ. ಬಳಿಕ ಆ ದುಡ್ಡನ್ನು ಆ ಕಾರ್ಯಕರ್ತ ತನ್ನ ಜೇಬಿನಲ್ಲಿ ಇಟ್ಟುಕೊಂಡು ಅಲ್ಲಿಂದ ಕಾಲ್ಕಿಳುವ ದೃಶ್ಯ ವಿಡಿಯೋದಲ್ಲಿದೆ. 25ನೇ ವಾರ್ಡ್ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ. ಜಿ. ಶಿವಕುಮಾರ್ ಸಮ್ಮುಖದಲ್ಲಿ ಹಣ ಹಂಚಿಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.