ಭಾರಿ ಗಾಳಿಗೆ ನೆಲಕ್ಕುರುಳಿದ ಬೃಹತ್ ಆಲದ ಮರ: ವಿದ್ಯುತ್ ಕಡಿತ - undefined
🎬 Watch Now: Feature Video
ಬೆಳಗಾವಿ: ಭಾರೀ ಗಾಳಿಯಿಂದ ನಗರದ ಬಜಾರ್ ಗಲ್ಲಿಯ ಮರಗಮ್ಮ ದೇವಿ ದೇವಸ್ಥಾನದಲ್ಲಿದ್ದ ಹಳೆಯ ಬೃಹತ್ ಆಲದ ಮರ ವಿದ್ಯುತ್ ಕಂಬ ಹಾಗೂ ತಂತಿ ಮೇಲೆ ಉರಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಆಲದ ಮರ ಧರೆಗುರುಳಿದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಅಲ್ಲದೇ ಸಂಚಾರ ಸಮಸ್ಯೆ ತಲೆದೋರಿದ ಕಾರಣ ಪ್ರಯಾಣಿಕರು ಪರದಾಡುವಂತಾಗಿದ್ದು, ಮಾರ್ಗ ಬದಲಿಸಿ ಸಂಚಾರ ಸಮಸ್ಯೆ ನಿಯಂತ್ರಿಸಲಾಗಿದೆ. ಮಹಾನಗರ ಪಾಲಿಕೆಯಿಂದ ಧರೆಗುರಳಿದ ಮರ ತೆರವುಗೊಳಿಸುವ ಕಾರ್ಯ ಭರಿದಂದ ಸಾಗಿದೆ.