ಚಳ್ಳಕೆರೆಯಲ್ಲಿ ಹಿಂದೂ ಮಹಾಗಣಪತಿ ನಿಮಜ್ಜನ ಪ್ರಯುಕ್ತ ಅದ್ಧೂರಿ ಮೆರವಣಿಗೆ - ಮೆರವಣಿಗೆ
🎬 Watch Now: Feature Video
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಹಿಂದೂ ಮಹಾಗಣಪತಿ ನಿಮಜ್ಜನ ಪ್ರಯುಕ್ತ ಅದ್ಧೂರಿ ಮೆರವಣಿಗೆ ಮಾಡಲಾಯಿತು. ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯನ್ನು ಇಂದು ಬುಡ್ನಹಟ್ಟಿ ಗ್ರಾಮದ ಬಳಿ ನಿಮಜ್ಜನ ಮಾಡಲಾಯಿತು. ನಗರದ ಜವಾಹರ ಲಾಲ್ ನೆಹರು ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಿಒ ಕಚೇರಿ ಆವರಣ ತಲುಪಿ ಬಡ್ನಹಟ್ಟಿ ಗ್ರಾಮಕ್ಕೆ ಕೊನೆಗೊಂಡಿತು. ಮೊದಲ ವರ್ಷದ ಕಾರ್ಯಕ್ರಮ ಇದಾಗಿದ್ದು, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದಿತ್ತು.