ಮತದಾನ ಜಾಗೃತಿ... ಬಾನಂಗಳದಲ್ಲಿ ಹಾರಾಡಿದ ವಿಶೇಷಚೇತನರು - ಮತದಾನ ಜಾಗೃತಿ
🎬 Watch Now: Feature Video
ಮತದಾನ ಜಾಗೃತಿ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಆಯೋಜಿಸಿದ್ಧ ಪ್ಯಾರಾ ಮೋಟಾರ್ ಗ್ಲೈಡಿಂಗ್ನಲ್ಲಿ ಆಯ್ದ ವಿಶೇಷ ಚೇತನರು ಕಾರವಾರದ ಬಳಿ ಬಾನಂಗಳದಲ್ಲಿ ಹಾರಾಡಿ ಹೊಸ ಅನುಭವ ತಮ್ಮದಾಗಿಸಿಕೊಂಡರು. ವಿಶೇಷವಾಗಿ ದಿವ್ಯಾಂಗ ಮತದಾರರಿಗಾಗಿಯೇ ಹಮ್ಮಿಕೊಂಡಿದ್ದ ಪ್ಯಾರಾ ಮೋಟಾರ್ ಗ್ಲೈಡಿಂಗ್ ಕಾರ್ಯಕ್ರಮದಲ್ಲಿ ಕಾರವಾರ ಸೇರಿದಂತೆ ವಿವಿಧ ತಾಲೂಕಿನ ವಿಕಲಚೇತನರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಎಂ.ರೋಶನ್ ಚಾಲನೆ ನೀಡಿದರು. ಈ ಮೂಲಕ ವಿಕಲಚೇತನರಲ್ಲಿ ಹಾಗೂ ಎಲ್ಲ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.