ಕೊರೊನಾ ಲಾಕ್ಡೌನ್: ಯುಗಾದಿಗೆ ಬಟ್ಟೆ ಖರೀದಿಸುತ್ತಿದ್ದವರಿಗೆ ಪೊಲೀಸರಿಂದ ಲಾಠಿ ಏಟು - ಕೊರೊನಾ ಸೋಂಕು
🎬 Watch Now: Feature Video
ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ಸೋಂಕಿನ ತಡೆಗೆ ರಾಜ್ಯ ಸರ್ಕಾರ ಹರಾಸಾಹಸ ಮಾಡುತ್ತಿದ್ದರೆ ಇತ್ತ ಚಳ್ಳಕೆರೆಯಲ್ಲಿ ಮಾತ್ರ ಯುಗಾದಿ ಹಬ್ಬಕ್ಕಾಗಿ ಜನರ ಬಟ್ಟೆ ಖರೀದಿ ಜೋರಾಗಿತ್ತು. ಚಳ್ಳಕೆರೆ ನಗರದ ಅಂಚೆ ಕಚೇರಿ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಬಟ್ಟೆ ಖರೀದಿಸುವಲ್ಲಿ ಜನರು ಬ್ಯುಸಿಯಾಗಿದ್ದರು. ರಾಜ್ಯಾದ್ಯಂತ ಲಾಕ್ಡೌನ್ ಆದೇಶ ಜಾರಿಯಲ್ಲಿದ್ರೂ ಕೂಡಾ ನಿರ್ಭಯವಾಗಿ ವ್ಯಾಪಾರ ಸಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಲಾಠಿ ರುಚಿ ತೋರಿಸಿ ಅವರನ್ನೆಲ್ಲ ಮನೆಗಟ್ಟಿದ್ದಾರೆ. ಅಲ್ಲದೆ ಮನೆಯಿಂದ ಹೊರಬರದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.