ಕಪ್ಪತ್ತಗುಡ್ಡದಲ್ಲಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 11 ಜನರ ಬಂಧನ - gadaga latest news

🎬 Watch Now: Feature Video

thumbnail

By

Published : Apr 23, 2020, 11:00 AM IST

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ವ್ಯಾಪ್ತಿಯ ಕಪ್ಪತ್ತಗುಡ್ಡ ಅರಣ್ಯ ಪ್ರದೇಶದಲ್ಲಿ ಬಲೆ ಹಾಕಿ ಪ್ರಾಣಿಗಳ ಬೇಟೆಯಾಡುತ್ತಿದ್ದ ಸುಮಾರು 11 ಜನರನ್ನು ಬಂಧಿಸಲಾಗಿದೆ. ಹೌದು, ಡೋಣಿ ಗ್ರಾಮದವರೇ ಆದ 11 ಜನ ಮೊಲ, ಕಾಡುಹಂದಿ, ಹಾಗೂ ಇನ್ನಿತರೆ ಪ್ರಾಣಿಗಳ ಬೇಟಿಯಾಡುತ್ತಿದ್ದರು. . ಆರ್‌ಎಫ್‌ಓ ಎಸ್.ಎಂ.ಶಿವರಾತ್ರೇಶ್ವರಸ್ವಾಮಿ ನೇತೃತ್ವದ ತಂಡದ ಕಾರ್ಯಾಚರಣೆಯಿಂದ 11 ಜನರನ್ನು ಬಂಧಿಸಲಾಗಿದೆ. ಇನ್ನು ಬಂಧಿತರಿಂದ 11 ಬೇಟೆ ಬಲೆ, 8 ಬೈಕ್​ಗಳನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಬಂಧಿತ ಆ 11 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.