ಮಲಗಿದ್ದ ವ್ಯಕ್ತಿಯ ಮೇಲೆ ಹರಿದು ಹೋದ 10 ಅಡಿ ಉದ್ದದ ಕಾಳಿಂಗ ಸರ್ಪ! - ಮನೆಯೊಳಗೆ ಮಲಗಿದ್ದ ವ್ಯಕ್ತಿಯ ಮೈ ಹರಿದು ಹೋದ ಹಾವು ಸುದ್ದಿ
🎬 Watch Now: Feature Video
ಚಿಕ್ಕಮಗಳೂರು: ಮನೆಯೊಳಗೆ ಮಲಗಿದ್ದ ವ್ಯಕ್ತಿಯ ಮೈ ಮೇಲೆ ಕಾಳಿಂಗ ಸರ್ಪ ಹರಿದಿದ್ದು, ವ್ಯಕ್ತಿ ಸರ್ಪದ ಬಾಯಿಂದ ಆಶ್ಚರ್ಯಕರವಾಗಿ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂತೋಷ್ ಎಂಬುವರ ಮನೆಯಲ್ಲಿ ನಾಗ ಎಂಬ ವ್ಯಕ್ತಿ ಮಲಗಿದ್ದ ವೇಳೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಇವರ ಮೈಮೇಲೆ ಹರಿದು ಹೋದ ಅನುಭವ ಆಗಿದೆ. ನಂತರದಲ್ಲಿ ಕಾಳಿಂಗ ಸರ್ಪ ಮನೆಯ ಮೂಲೆಯಲ್ಲಿರುವ ರಟ್ಟಿನ ಬಾಕ್ಸ್ ಒಳಗೆ ಸೇರಿ ಬೆಚ್ಚಗೆ ಮಲಗಿಕೊಂಡಿತ್ತು. ಶೃಂಗೇರಿಯ ಸ್ನೇಕ್ ಅರ್ಜುನ್ ಹಾವನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಸಂತೋಷ್ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.