ಶೆಲ್ಬಿ ರೋಜರ್ಸ್ ಸೋಲಿಸಿ ಯರ್ರಾ ವ್ಯಾಲಿ ಸೆಮಿಫೈನಲ್ ತಲುಪಿದ ವಿಶ್ವ ನಂ .1 ಆಶ್ ಬಾರ್ಟಿ - ವಿಶ್ವದ ನಂ .1 ಟೆನ್ನಿಸ್ ಆಟಗಾರ್ತಿ ಆಶ್ ಬಾರ್ಟಿ
🎬 Watch Now: Feature Video
ಮೆಲ್ಬೋರ್ನ್ (ಆಸ್ಟ್ರೇಲಿಯಾ): ವಿಶ್ವದ ನಂ .1 ಟೆನ್ನಿಸ್ ಆಟಗಾರ್ತಿ ಆಸ್ಟ್ರೇಲಿಯಾದ ಆಶ್ ಬಾರ್ಟಿ, ಅಮೆರಿಕಾದ ಶೆಲ್ಬಿ ರೋಜರ್ಸ್ ಅವರನ್ನು 7-5, 2-6, 10-4 ಸೆಟ್‌ಗಳಿಂದ ಸೋಲಿಸಿ ಯಾರ್ರಾ ವ್ಯಾಲಿ ಕ್ಲಾಸಿಕ್‌ನ ಸೆಮಿಫೈನಲ್ ಪ್ರವೇಶಿಸಿದ್ದಾರೆ. "ಇಲ್ಲಿ ಛಾವಣಿಗಳನ್ನು ಮುಚ್ಚಿದ ಕಾರಣ ಆಟ ಸ್ವಲ್ಪ ಮಂದವಾಗಬಹುದು ಎಂದು ನಾನು ಭಾವಿಸಿದ್ದೆ. ಆದರೆ ಶೆಲ್ಬಿಯ ಹೊಡೆತಗಳನ್ನು ಎದುರಿಸಿ, ಹೊಡೆಯಲು ಸಾಧ್ಯವಾಯಿತು"ಎಂದು ಬಾರ್ಟಿ ಹೇಳಿಕೊಂಡಿದ್ದಾರೆ. ಮೆಲ್ಬೋರ್ನ್‌ನ ಕ್ವಾರಂಟೈನ್ ಹೋಟೆಲ್‌ವೊಂದರಲ್ಲಿ ಕೆಲಸಗಾರನೊಬ್ಬ ಕೊರೊನಾ ವೈರಸ್ಗೆ ತುತ್ತಾದ ಹಿನ್ನೆಲೆಯಲ್ಲಿ ಪಂದ್ಯಗಳನ್ನು ತಡೆ ಹಿಡಿಯಲಾಗಿದೆ. 500ಕ್ಕೂ ಹೆಚ್ಚು ಆಟಗಾರರು ಮತ್ತು ಅಧಿಕಾರಿಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.