ಯಾರಾ ವ್ಯಾಲಿ ಕ್ಲಾಸಿಕ್ ಟೂರ್ನಿ: ಸೆಮೀಸ್ಗೆ ಲಗ್ಗೆಯಿಟ್ಟ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ - Grand Slam tournament News
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10511140-thumbnail-3x2-mng.jpg)
ಮೆಲ್ಬೊರ್ನ್:ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಟೂರ್ನಿ ಆಸ್ಟ್ರೇಲಿಯಾದ ಓಪನ್ಗೆ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಭರ್ಜರಿ ತಯಾರಿ ನಡೆಸಿದ್ದು, ಸದ್ಯದ ಯಾರಾ ವ್ಯಾಲಿ ಕ್ಲಾಸಿಕ್ ಟೂರ್ನಿಯಲ್ಲಿ ಸೆಮೀಸ್ಗೆ ಲಗ್ಗೆ ಹಾಕಿದ್ದಾರೆ. 23 ಬಾರಿ ಗ್ರ್ಯಾನ್ ಸ್ಲಾಮ್ ಕಿರೀಟ್ ಧರಿಸಿರುವ ಸೆರೆನಾ ಮಹಿಳಾ ಸಿಂಗಲ್ಸ್ ಹಣಾಹಣಿಯಲ್ಲಿ 6–2, 4–6, 10-6ರಿಂದ ಅಮೆರಿಕನ್ ಡೇನಿಯಲ್ ಕಾಲಿನ್ಸ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇನ್ನು ಸೆಮಿ ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಆ್ಯಶ್ ಬಾರ್ಟಿ ವಿರುದ್ಧ ಸೆಣಸಾಡಲಿದ್ದಾರೆ.
Last Updated : Feb 5, 2021, 9:03 PM IST