ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮೇಲೆ ಕಣ್ಣು.. ನೆಟ್ನಲ್ಲಿ ಬೆವರು ಹರಿಸ್ತಿರುವ ಭಾರತ-ಇಂಗ್ಲೆಂಡ್!
🎬 Watch Now: Feature Video
ಚೆನ್ನೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲೆ ಕಣ್ಣಿಟ್ಟಿರುವ ಭಾರತ - ಇಂಗ್ಲೆಂಡ್ ತಂಡ ಫೆ.5ರಿಂದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ನೆಟ್ನಲ್ಲಿ ಅಭ್ಯಾಸ ಆರಂಭಿಸಿವೆ. ಎಂ.ಚಿದಂಬರಂ ಮೈದಾನದಲ್ಲಿ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಅಭ್ಯಾಸ ಆರಂಭಿಸಿವೆ. ಜೂನ್ ತಿಂಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದ್ದು, ಈಗಾಗಲೇ ನ್ಯೂಜಿಲ್ಯಾಂಡ್ ತಂಡ ಪ್ರವೇಶ ಪಡೆದುಕೊಂಡಿದೆ. ಇದೀಗ ಈ ಟೆಸ್ಟ್ನಲ್ಲಿ ಹೆಚ್ಚಿನ ಪಂದ್ಯಗಳಲ್ಲಿ ಜಯ ಸಾಧಿಸುವ ತಂಡ ಫೈನಲ್ಗೆ ಅರ್ಹತೆ ಪಡೆದುಕೊಳ್ಳಲಿದೆ.