thumbnail

By

Published : Nov 6, 2020, 1:23 PM IST

ETV Bharat / Videos

ಐಪಿಎಲ್​ನಲ್ಲಿ ಯಾವುದೂ ಸುಲಭವಲ್ಲ: ಮುಂಬೈ ವಿರುದ್ಧ ಸೋತ ನಂತರ ರಿಕ್ಕಿ ಪಾಂಟಿಂಗ್​ ಹೇಳಿಕೆ

ನವೆಂಬರ್ 5 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ -2020ಯ ಮೊದಲ ಅರ್ಹತಾ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಮುಂಬೈ ಇಂಡಿಯನ್ಸ್ (ಎಂಐ) 57 ರನ್ ಅಂತರದಲ್ಲಿ ಸುಲಭ ಜಯ ಸಾಧಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಕ್ಯಾಪಿಟಲ್ಸ್ ಕೋಚ್​ ರಿಕ್ಕಿ ಪಾಂಟಿಂಗ್​, ಐಪಿಎಲ್​ನಲ್ಲಿ ಮಾರ್ಕಸ್​​ ಸ್ಟೋಯ್ನಿಸ್​​​ ತಾವು ಎಂತಹ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. ಅಕ್ಸರ್​ ಪಟೇಲ್​ ಕೂಡ ತುಂಬಾ ಚೆನ್ನಾಗಿ ಬ್ಯಾಟಿಂಗ್​ ಮಾಡಿದ್ರು. ನಮ್ಮ ಪ್ಲಾನ್​ ಸರಿಯಾಗಿಯೇ ಇತ್ತು. ಆದರೆ, ಮೈದಾನದಲ್ಲಿ ನಾವು ಅಂದುಕೊಂಡಂತೆ ಆಡಲು ಸಾಧ್ಯವಾಗಿಲ್ಲ. ಕಗಿಸೊ ರಬಾಡ ಮತ್ತು ಅನ್​ರಿಕ್​ ನೋಕಿಯೇ ಇಡೀ ಟೂರ್ನಿಯಲ್ಲಿ ​ ಉತ್ತಮವಾಗಿ ಬೌಲಿಂಗ್​ ಮಾಡಿದ್ರು. ಆದ್ರೆ ಐಪಿಎಲ್​ ಮ್ಯಾಚ್​ ನಲ್ಲಿ ಯಾವುದೂ ಸುಲಭವಲ್ಲ, ಒಂದು ಬಾಲ್​ ಅನ್ನು ಕೂಡ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ರಿಕ್ಕಿ ಪಾಟಿಂಗ್​ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.